ಪ್ರೇಮ ನಾವಿಕ

images

ಪ್ರೇಮ ಹಡಗಿನಲ್ಲಿ ಪ್ರೇಮ ನಾವಿಕನಂತೆ ನಾನು
ಬರುವರು ಪ್ರಯಾಣಕ್ಕೆ ಕೆಲವರು
ಶುಲ್ಕ ಪಾವತಿಯೇ ದ್ವೇಷತೊರೆ ಅದೇ ಪ್ರೀತಿ ಕರೆ
ಮೇಲೆಂಬುದು ಕೀಳೆಂಬುದು ಇಲ್ಲ

ಎಲ್ಲಾ ನದಿಯ ನೀರು ಸಮುದ್ರವಾಗಿ
ಒಂದಾಗಿ ತೂಗುತಿದೆ ಅಲೆಗಳಾಗಿ …
ಅವು ಸಹ ತಲುಪುವವು ಪ್ರೇಮ ಲೋಕವ
ಆದರೆ ಇಂತಿರುಗಿ ಹೋಗುತವೆ

ಅಲೆಗಳು ದಡಮುಟ್ಟಿದಾಕ್ಷಣ
ಮತ್ತೆ ತರಲು ಪ್ರೀತಿ ಹಕ್ಕಿಗಳನ್ನು
ಪ್ರೇಮಲೋಕಕ್ಕೆ ಎಲ್ಲರನ್ನು ಪ್ರೀತಿ ದಡವನ್ನು
ತಲುಪಿಸಿವುದು ಅಲೆಗಳ ಗುರಿ

ಆದರೆ ನಾವೇಕೆ ನಮ್ಮ ತಮ್ಮಗಳೆಂದು
ದ್ವೇಷಾಬಿಡುವುದಿಲ್ಲ
ಜೀವವಿಲದಿದ್ದರು ಹರಿಯುವ ಜೀವ ನದಿಗಲ
ತವರೂರು ಸಮುದ್ರ

ದ್ವೇಷವಿಲ್ಲದೆ ಬದುಕುತಿಲವೇ ಒಂದುಗೂಡಿ
ಮನುಷ್ಯನಲ್ಲೂ ಹರಿಯುತದ್ದೇ ನೆತ್ತರೆಂಬ ಜೀವನದಿ
ದ್ವೇಷವೆಂಬ ಬುಗ್ಗೆಯನ್ನು ಕುದಿಯುತಾ
ಇದು ಹೇಗೆ ಪ್ರೇಮಲೋಕದ ತವರೂರದಿತು

ಪಾಪತೊರೆಯುವ ನದಿಗಳನ್ನು ಪಾಪಿಗಳಂತೆ
ವರ್ತಿಸುವ ನದಿಗಳಿಗೆ ಹೋಲಿಕೆಯಲ್ಲಿ …
ಹೋಲಿಕೆಯಾದೀತು ಕೆಲವರಿಗಿ
ಪ್ರೇಮ ಮಂತ್ರವನ್ನು ಜಪಿಸುವವರಿಗೆ

ಪ್ರೇಮ ಪ್ರೀತಿಯನ್ನು ಹಂಚುವವರಿಗೆ
ದ್ವೇಷವನ್ನು ತೊರೆದು ಪ್ರೇಮ ನಾವಿಕನಲ್ಲಿಗೆ ಬರುವವರಿಗೆ
ಹೋಲಿಕೆಯಾದೀತು ಅವರಿಗೆ
ಪ್ರೇಮ ನಾವಿಕನಲ್ಲಿ ಬರುವವರಿಗೆ

ಅಕ್ಷಯ್ ಕುಮಾರ್

2 Comments

Add a Comment

Your email address will not be published. Required fields are marked *

error: Content is protected !!